ತಾಂತ್ರಿಕ ಶಿಕ್ಷಣ ಇಲಾಖೆಗೆ ಸ್ವಾಗತ English

ತಾಂತ್ರಿಕ ಶಿಕ್ಷಣ ಇಲಾಖೆ ಆರಂಭ

ಕೆಲವು ತಾಂತ್ರಿಕ ವಿಷಯದ ಕೌಶಲ್ಯವನ್ನು ಕಲಿಸುವ ವಿದ್ಯಾಸಂಸ್ಥೆಗಳನ್ನು ಸ್ವಾತಂತ್ರ್ಯ ಪೂರ್ವ ಅಂದರೆ 1943ನೇ ಇಸವಿಯಲ್ಲಿ ಪ್ರಾರಂಭಿಸಲಾಗಿ,ಅವುಗಳಿಗೆ "ಆಕ್ಯುಪೇಷನಲ್ ಇನ್ಸ್ಟಿಟ್ಯೂಟ್" ಗಳೆಂದು ಕರೆಯಲಾಗುತಿತ್ತು. ನಂತರ ಅವುಗಳನ್ನು ಮೂರು ವರ್ಷದ ತಾಂತ್ರಿಕ ಡಿಪ್ಲೋಮಾ ಪಠ್ಯಕ್ರಮದೊಂದಿಗೆ "ಪಾಲಿಟೆಕ್ನಿಕ್ " ಗಳೆಂದು ಕರೆಯಲಾಯಿತು. ಆಗ ಸಂಸ್ಥೆಗಳು "ಪಬ್ಲಿಕ್ ಇನ್ ಸ್ತ್ರಕ್ಷನ್ ಡಿಪಾರ್ಟ್ಮೆಂಟ್ " ನ ಅಧೀನದಲ್ಲಿದ್ದವು. ಸದರಿ ಪಾಲಿಟೆಕ್ನಿಕ್ಗಳ ಹಾಗು ತಾಂತ್ರಿಕ ಪದವಿ ಕಾಲೇಜುಗಳ ಸಂಖ್ಯೆ ಹೆಚ್ಚಾದುದರಿಂದ 1959 ರಲ್ಲಿ "ತಾಂತ್ರಿಕ ಶಿಕ್ಷಣ ಇಲಾಖೆ" ಅಸ್ತಿತ್ವಕ್ಕೆ ಬಂದಿತು.

ದೂರದೃಷ್ಟಿ

 • ಯೋಜನಬದ್ಧವಾದ ಹಾಗೂ ಸಮರ್ಥವಾದ ತಾಂತ್ರಿಕ ಶಿಕ್ಷಣ ವ್ಯವಸ್ಥೆಯನ್ನು ರಾಜ್ಯದಲ್ಲಿ ವೃದ್ಧಿಗೊಳಿಸುವುದು.
 • ಬೇಡಿಕೆಗೆ ಆನುಗುಣವಾಗಿ ಡಿಪ್ಲೋಮಾ ಸಂಸ್ಥೆಗಳಿಗೆ ಯೋಜನೆಗಳನ್ನು ರೂಪಿಸುವುದು ಮತ್ತು ಸಾಕಷ್ಟು ಮಾನವ ಸಂಪನ್ಮೂಲ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
 • ನಿಷ್ಪಕ್ಷಪಾತ ಮೌಲ್ಯಮಾಪನ ಪದ್ದತಿ ಹಾಗೂ ದೃಢೀಕರಣ ವ್ಯವಸ್ಥೆಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಗಳಿಗೆ ನೀಡುವುದು.
 • ಎ.ಐ.ಸಿ.ಟಿ.ಇ, ಎಂ.ಹೆಚ್.ಆರ್.ಡಿ , ಎನ್,ಐ.ಟಿ.ಟಿ.ಆರ್, ವಿಶ್ವವಿದ್ಯಾಲಯಗಳು , ಕೈಗಾರಿಕೆಗಳು ಮತ್ತು ಇತರೆ ರಾಜ್ಯದ ನಿರ್ದೇಶನಾಲಯಗಳೊಂದಿಗೆ ಸಮನ್ವಯ ಸಾಧಿಸುವುದು.
 • ತಾಂತ್ರಿಕ ಶಿಕ್ಷಣ ವಲಯಕ್ಕೆ ಅವಶ್ಯವಿರುವ ದೀರ್ಘಾವಧಿ ಯೋಜನೆಗಳನ್ನು ನಿರೂಪಿಸುವುದು ಹಾಗೂ ಆಯವ್ಯಯ ವಿಭಜನೆ ಮಾಡಿ ಸರಿಯಾದ ಹಂಚಿಕೆ ಮತ್ತು ಸದ್ಬಳಕೆ ಮಾಡುವುದು.
 • ಕೆಳಗಿನ ಅಂಶಗಳಿಗೆ ಗುಣಾತ್ಮಕವಾದ ಮತ್ತು ಸಾಮಾಜಿಕ ನ್ಯಾಯಯುತವಾದ ರೂಪರೇಷೆಗಳನ್ನು ನಿಯಮಿತಗೊಳಿಸುವುದು.(1)ವಿದ್ಯಾರ್ಥಿಗಳ ಪ್ರವೇಶಾತಿ (2)ಶಿಕ್ಷಕ ವೃಂದದ ನೇಮಕಾತಿ, ತರಬೇತಿ ಮತ್ತು ತಾಂತ್ರಿಕ ಶಿಕ್ಷಣದ ಸರ್ವಾಂಗೀಣ ಅಭಿವೃದ್ದಿ .
 • ವಿದ್ಯಾರ್ಥಿಗಳ ಹಾಗೂ ಶಿಕ್ಷಕ ವರ್ಗದ ಸರ್ವಾಂಗೀಣ ಅಭಿವೃದ್ದಿ, ವಿದ್ಯಾರ್ಥಿಗಳಿಗೆ ಉದ್ಯೋಗ-ಮಾರ್ಗದರ್ಶನ,ಕುಂದು ಕೊರತೆಗಳ ಪರಿಹಾರ ಮತ್ತು ಸಲಹಾ ಸೇವೆಗಳನ್ನು ನೀಡುವುದು.
 • ನಿರ್ದೇಶನಾಲಯದ ಶಾಖೆಗಳು ಸಾರ್ವಜನಿಕರ ಹಾಗೂ ಎಲ್ಲಾ ಸಂಸ್ಥೆಗಳೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳುವಂತೆ ನೋಡುವುದು ಮತ್ತು ಕುಂದು ಕೊರತೆಗಳ ನಿವಾರಣೆಗೆ ಸ್ಪಂದಿಸುವುದು .

ನಿರ್ದಿಷ್ಟ ಪಡಿಸಿದ ಗುರಿ

ರಾಷ್ಟ್ರ ಹಾಗೂ ರಾಜ್ಯದ ಶೈಕ್ಷಣಿಕ ನೀತಿಗನುಗುಣವಾಗಿ ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣವನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಬದ್ಧವಾಗಿರುತ್ತದೆ. ನಿರ್ದೇಶನಾಲಯವು ಕೈಗಾರಿಕೆ, ವಾಣಿಜ್ಯ ಮತ್ತು ಸಮಾಜದ ಅವಶ್ಯಕತೆಗೆ ತಕ್ಕಂತೆ ಗುಣಾತ್ಮಕ, ತಾಂತ್ರಿಕ ಮತ್ತು ವೃತ್ತಿಪರ ಪರಿಣಿತ ಮಾನವ ಸಂಪನ್ಮೂಲವನ್ನು ಒದಗಿಸಲು ಬದ್ಧವಾಗಿರುತ್ತದೆ . ಮೇಲಿನ ದೂರದೃಷ್ಟಿಯ ಗುರಿಯನ್ನು ಈ ಕೆಳಕಂಡಂತೆ ಸಾಧಿಸಲಾಗುವುದು.

 • ಸಮಾಜದ ಅವಶ್ಯಕತೆಯನ್ನು ಪೂರೈಸುವಂತಹ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ,ನಿರ್ವಹಣೆ ಮತ್ತು ಬೆಳವಣಿಗೆಗೆ ಶ್ರಮಿಸುವುದು.
 • ಯುವಕರು ಮತ್ತು ವಯಸ್ಕರ ಅವಶ್ಯಕತೆಗೆ ತಕ್ಕಂತೆ ಸಾಂಪ್ರದಾಯಿಕ ಮತ್ತು ಸಂಪ್ರದಾಯಕವಲ್ಲದ ಪ್ರಗತಿಪರ ಕಾರ್ಯಕ್ರಮಗಳನ್ನು ರೂಪಿಸಿ ತಾಂತ್ರಿಕ ಶಿಕ್ಷಣವನ್ನು ವಿಸ್ತಾರಗೊಳಿಸಲು ಪ್ರೋತ್ಸಾಹಿಸುವುದು.
 • ಬದಲಾಗುತ್ತಿರುವ ಕೈಗಾರಿಕಾ ನೀತಿ ಮತ್ತು ಸಮಾಜದ ಅವಶ್ಯಕತೆಗೆ ತಕ್ಕಂತೆ ಸ್ಪಂದಿಸುವ ಜವಾಬ್ಧಾರಿಯುತ ಮತ್ತು ಸಮರ್ಥ ತಾಂತ್ರಿಕ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವುದು.
 • ವೃತ್ತಿ ಪರವಾದ ಮಾದರಿ ಆಡಳಿತ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸುವುದು.
 • ಪರಿಣಾಮಕಾರಿ ನಿರ್ಣಯಗಳಿಗಾಗಿ ಉತ್ತಮ ಮಾಹಿತಿ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸುವುದು.
 • ಮಹಿಳೆಯರು ,ಅಂಗವಿಕಲರು,ಗ್ರಾಮೀಣರು ,ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರುಗಳ ವಿದ್ಯಾಭ್ಯಾಸದ ಅವಶ್ಯಕತೆಯನ್ನು ಪೂರೈಸಲು ಹೆಚ್ಚಿನ ಆದ್ಯತೆಯನ್ನು ನೀಡುವುದು.
 • ವಿದ್ಯಾರ್ಥಿಗಳ ಉದ್ಯೋಗ ಮತ್ತು ಮಾರ್ಗದರ್ಶನ ಸೇವೆಗಳನ್ನು ಬಲಪಡಿಸುವುದು.
 • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಹಯೋಗ ಬೆಳೆಸುವುದು.

ನಮ್ಮ ಪ್ರಮುಖ ಮೌಲ್ಯಗಳು

ಸಮಾನತೆ ,ಮಾನವೀಯತೆ,
ಪಾರದರ್ಶಕ ಕಾರ್ಯಾಚರಣೆ
ಪ್ರವೇಶ ಸಾದ್ಯತೆ,ದಕ್ಷತೆ
ತೆರೆದ ಸಂವಹನ ಮತ್ತು
ಪರಿಸರ ಅಭಿವೃದ್ದಿಗಾಗಿ ಕಾಳಜಿ

ತಾಂತ್ರಿಕ ಶಿಕ್ಷಣ ಇಲಾಖೆ ಪ್ರಕ್ರಿಯೆಯಲ್ಲಿನ ಭಾಗಿದಾರರು

 • ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿಯಾಲಯ ,ಭಾರತ ಸರ್ಕಾರ.
 • ಉನ್ನತ ಶಿಕ್ಷಣ ಇಲಾಖೆ ,ಕರ್ನಾಟಕ ಸರ್ಕಾರ.
 • ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ.
 • ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಟೀಚರ್ಸ್ ಟ್ರೈನಿಂಗ್ ಅಂಡ್ ರಿಸರ್ಚ್.
 • ಇಂಡಿಯನ್ ಸೊಸೈಟಿ ಆಫ್ ಟೆಕ್ನಿಕಲ್ ಎಜುಕೇಶನ್ .
 • ಕಾನ್ ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ .
 • ದಿ ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ವೇರ್ & ಸರ್ವೀಸ್ ಕಂಪೆನಿ.
 • ದಿ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್(ಭಾರತ).
 • ರಾಷ್ಟ್ರೀಯ ಮಾನ್ಯತಾ ಮಂಡಳಿ.
 • ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಯಮ.
 • ನಿರ್ದೇಶನಾಲಯದ ಕಾರ್ಯಗಳು

 • ರಾಜ್ಯದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳ ಹಾಗೂ ಡಿಪ್ಲೋಮಾ ಪಾಲಿಟೆಕ್ನಿಕ್ ಗಳ ಆಡಳಿತ ನಿಯಂತ್ರಣ , ಮೇಲ್ವಿಚಾರಣೆ ಹಾಗೂ ಅಭಿವೃದ್ದಿಗಾಗಿ ಯೋಜನೆಯನ್ನು ರೂಪಿಸುವುದು , ಕಾರ್ಯಕ್ರಮ ಗಳನ್ನು ಅನುಷ್ಠಾನಗೊಳಿಸುವುದು.
 • ರಾಜ್ಯದಲ್ಲಿನ ಇಂಜಿನಿಯರಿಂಗ್ ಪದವಿ ಹಾಗೂ ಡಿಪ್ಲೋಮಾ ಮಟ್ಟದಲ್ಲಿ ಹೊಸ ಕೋರ್ಸ್ ಗಳನ್ನು ಗುರುತಿಸುವುದು ಮತ್ತು ಹೊಸ ಕಾಲೇಜು ಪ್ರಾರಂಭಿಸಲು ಮೂಲಭೂತ ಸೌಲಭ್ಯ ಪರಿಶೀಲಿಸಿ ಶಿಫಾರಸ್ಸು ಮಾಡುವುದು.
 • ತಾಂತ್ರಿಕ ಗುಣಮಟ್ಟವನ್ನು ಕಾಪಾಡಲು ಎಲ್ಲಾ ತಾಂತ್ರಿಕ ಸಂಸ್ಥೆಗಳ ತಪಾಸಣೆಯನ್ನು ಕಾಲಕಾಲಕ್ಕೆ ನಡೆಸುವುದು.
 • ಡಿಪ್ಲೋಮಾ ಪ್ರವೇಶಾತಿಗಾಗಿ ಅಭ್ಯರ್ಥಿಗಳ ಆಯ್ಕೆಗೆ ಸೂಕ್ತ ಕಾರ್ಯವಿಧಾನ ತಯಾರಿಸಿ, ಮಾರ್ಗದರ್ಶನ ನೀಡುವುದು.
 • ಡಿಪ್ಲೋಮಾ ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವುದು , ತೇರ್ಗಡೆಯಾದ ಅಭ್ಯರ್ಥಿಗಳಿಗೆ ಡಿಪ್ಲೋಮಾ ತರುವಾಯ ಪ್ರಮಾಣ ಪತ್ರಗಳನ್ನು ವಿತರಿಸುವುದು.
 • ಸರ್ಕಾರಿ ಮತ್ತು ಖಾಸಗಿ ಅನುದಾನಿತ ತಾಂತ್ರಿಕ ಸಂಸ್ಥೆಗಳಿಗೆ ಶೈಕ್ಷಣಿಕ ಮಂಜೂರಾತಿ ನೀಡುವುದು.
 • ಅನುದಾನಿತ ಪಾಲಿಟೆಕ್ನಿಕ್ ಗಳಿಗೆ ಅನುದಾನ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಮಂಜೂರು ಮಾಡುವುದು.
 • ಉನ್ನತ ವ್ಯಾಸಂಗ ಮತ್ತು ಸಂಶೋಧನೆಗಾಗಿ ಬೋಧಕ ಸಿಬ್ಬಂದಿಯನ್ನು ನಿಯೋಜಿಸುವುದು.
 • ಆಡಳಿತ ಮತ್ತು ಶೈಕ್ಷಣಿಕ ನೀತಿಗಳನ್ನು ಕಾಪಾಡುವುದು ಹಾಗೂ ಮೂಲಭೂತ ಸೌಕರ್ಯಗಳ ಇರುವಿಕೆ ಕುರಿತು ತಪಾಸಣೆ ನಡೆಸುವುದು.


 • ತಾಂತ್ರಿಕ ಸಂಸ್ಥೆಗಳು ಮತ್ತು ವರ್ಗವಾರು ವಿಂಗಡಣೆ

  ಸಂಸ್ಥೆಗಳು
  ಇಂಜಿನಿಯರಿಂಗ್ ಕಾಲೇಜುಗಳು

  ಪಾಲಿಟೆಕ್ನಿಕ್ ಗಳು
  ಕಿರಿಯ ತಾಂತ್ರಿಕ ಶಾಲೆಗಳು
  1. ಸರ್ಕಾರಿ
  11 +1*
  80+2*
  06
  2.ಅನುದಾನಿತ
  09+2*
  44
  -
  3.ಖಾಸಗಿ
  164 +1*
  196
  06
  4.ವಿಶ್ವವಿದ್ಯಾಲಯ
  02+1*
  -
  -

  5.ಅಲ್ಪಸಂಖ್ಯಾತ Minority Colleges(MC)

  15
  -
  -
  ಒಟ್ಟು
  206
  322
  12
  *ಸಂಜೆ ಪಾಲಿಟೆಕ್ನಿಕ್ /ಇಂಜಿನಿಯರಿಂಗ್ ಕಾಲೇಜುಗಳು

  ಆಡಳಿತಾತ್ಮಕ ವ್ಯವಸ್ಥೆ

  ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಕಚೇರಿಯು ಬೆಂಗಳೂರಿನಲ್ಲಿದೆ . ನಿರ್ದೇಶಕರು ಸಂಸ್ಥೆಯ ಮುಖ್ಯಸ್ಥರು.

  ಪದನಾಮ
  ಒಟ್ಟು ಹುದ್ದೆಗಳು
  ನಿರ್ದೇಶಕರು
  01
  ಜಂಟಿ ನಿರ್ದೇಶಕರು
  05
  ಉಪ ನಿರ್ದೇಶಕರು
  06
  ಸಹಾಯಕ ನಿರ್ದೇಶಕರು
  07
  ಆಡಳಿತಾಧಿಕಾರಿಗಳು
  01
  ಸಹಾಯಕ ಆಡಳಿತಾಧಿಕಾರಿಗಳು
  03
  ರೆಜಿಸ್ಟ್ರಾರ್
  04
  ಇತರೆ ಅಧಿಕಾರಿಗಳು
  27
   

  ಇಲಾಖೆಗೆ ಪ್ರಾರಂಭದಿಂದ ಸೇವೆ ಸಲ್ಲಿಸಿದ ನಿರ್ದೇಶಕರ ಹೆಸರು ಮತ್ತು ಸೇವಾ ಅವಧಿ

  ಕ್ರ.ಸಂ
  ಹೆಸರು
  ಇಂದ
  ವರೆಗೆ
  1
  ಶ್ರೀ ಕೆ. ಚೆನ್ನಬಸವಯ್ಯ
  ಲೋಕೋಪಯೋಗಿ ಇಲಾಖೆ
  19.10.1959
  11.05.1961
  2
  ಶ್ರೀ ಐ.ಎಂ. ಮುಗದಮ್
  ಲೋಕೋಪಯೋಗಿ ಇಲಾಖೆ
  20.12.1961
  07.10.1964
  3
  ಡಾ || ಬಿ.ಎಲ್ .ಶಾಂತಮಲ್ಲಪ್ಪ
  ತಾ ಶಿ ಇ
  08.10.1964
  18.04.1974
  4
  ಶ್ರೀ ಪಿ.ಎನ್. ಪದ್ಮನಾಭ
  ಭಾ ಆ ಸೇ
  19.04.1974
  12.06.197
  5
  ಶ್ರೀ ಕೆ . ಎಸ್ . ಬಲ್ಲಾಳ್
  ಲೋಕೋಪಯೋಗಿ ಇಲಾಖೆ
  12.06.1974
  31.12.1975
  6
  ಶ್ರೀ ಆರ್.ಎಲ್. ಶ್ರೇಷ್ಠ
  ಲೋಕೋಪಯೋಗಿ ಇಲಾಖೆ
  01.01.1976
  30.04.1977
  7
  ಶ್ರೀ ಎ.ಆರ್. ಭಾವಿಕಟ್ಟಿ
  ಲೋಕೋಪಯೋಗಿ ಇಲಾಖೆ
  01.01.1978
  30.04.1978
  8
  ಶ್ರೀ ಎಂ.ಆರ್. ಧರ್ಮಯ್ಯಗೌಡ
  ಲೋಕೋಪಯೋಗಿ ಇಲಾಖೆ
  11.05.1978
  30.11.1979
  9
  ಶ್ರೀ ನೂರ್ ಅಹ್ಮದ್
  ಲೋಕೋಪಯೋಗಿ ಇಲಾಖೆ
  01.12.1979
  26.11.1981
  10
  ಪ್ರೊ || ಬಿ. ಬಸವರಾಜು
  ತಾ ಶಿ ಇ
  27.11.1981
  12.04.1982
  11
  ಶ್ರೀ ಡಿ. ಕೆ . ಸತ್ಯನಾರಾಯಣಶೆಟ್ಟಿ
  ಲೋಕೋಪಯೋಗಿ ಇಲಾಖೆ
  13.04.1982
  26.12.1987
  12
  ಶ್ರೀ ಬಿ. ಎನ್ . ಕೃಷ್ಣಮೂರ್ತಿ
  ಬಿ ಡಿ ಟಿ
  26.12.1987
  30.10.1990
  13
  ಪ್ರೊ || ಪಿ .ವಿ . ಭಂಡಾರಿ
  ಬಿ ಡಿ ಟಿ
  31.10.1990
  31.01.1996
  14
  ಡಾ||ನಾಗಂಬಿಕದೇವಿ
  ಭಾ ಆ ಸೇ
  01-02-1996
  22-05-1996
  15
  ಡಾ||ಕೆ. ಬಾಲವೀರ ರೆಡ್ಡಿ
  ಎನ್ಐಟಿ,ಸುರತ್ಕಲ್
  23.05.1996
  31.03.2001
  16
  ಡಾ|| ವಿ. ಸೀನಪ್ಪ
  ಎ ಐ ಟಿ (ಅನುದಾನಿತ)
  23.07.2001
  22.07.2002
  17
  ಶ್ರೀ ಕೆ. ಚೆನ್ನಕೇಶವ ಕಲ್ಮಾಡಿ
  ತಾ ಶಿ ಇ
  23.07.2002
  30.11.2003
  18
  ಪ್ರೊ || ಕೆ. ಬಸವರಾಜು
  ತಾ ಶಿ ಇ
  01.12.2003
  30.06.2006
  19
  ಶ್ರೀ ಮಹಮ್ಮದ್ ಅಲಿ
  ತಾ ಶಿ ಇ
  01.07.2006
  31.01.2007
  20
  ಶ್ರೀಮತಿ ಎಂ.ವಿ. ಜಯಂತಿ
  ಭಾ ಆ ಸೇ
  02.02.2007
  08.01.2008
  21
  ಶ್ರೀ ಟಿ. ಎ .ಪಾರ್ಥಸಾರಥಿ
  ಭಾ ಆ ಸೇ
  09.01.2008
  28-05-09
  22
  ಶ್ರೀ ಎನ್.ಡಿ. ಪ್ರಸಾದ್
  ತಾ ಶಿ ಇ
  28-05-2009
  02-06-2009
  23
  ಶ್ರೀ ಹೆಚ್.ಯು. ತಳವಾರ
  ತಾ ಶಿ ಇ
  03-06-2009
   

  ನಿರ್ದೇಶನಾಲಯದ ಮುಖ್ಯ ಶಾಖೆಗಳು

  ಆಡಳಿತ ಮತ್ತು ಸಿಬ್ಬಂದಿ ಶಾಖೆ

  • ನಿರ್ದೇಶನಾಲಯ ಮತ್ತು ಸರ್ಕಾರಿ/ಖಾಸಗಿ ಅನುದಾನಿತ ಪಾಲಿಟೆಕ್ನಿಕ್ ಗಳ , ಸರ್ಕಾರಿ/ಖಾಸಗಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಆಡಳಿತಾತ್ಮಕ ವಿಷಯಗಳ ಸಮರ್ಪಕ ನಿರ್ವಹಣೆ.
  • ಆಡಳಿತಾತ್ಮಕ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು.
  • ಎಲ್ ಟಿ ಸಿ /ಹೆಚ್ ಟಿ ಸಿ/ಜಿಪಿ ಎಫ್ /ವೈದ್ಯಕೀಯ ಸಂಬಂಧಿ ಬಿಲ್ಲುಗಳ ಮಂಜೂರಾತಿ ನೀಡುವುದು.
  • ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ಕಾಲ - ಕಾಲಕ್ಕೆ ಪರಿಷ್ಕರಿಸುವುದು.
  • ಬೋಧಕ/ ಬೋಧಕೇತರ ಸಿಬ್ಬಂದಿಗಳ ನೇಮಕಾತಿ/ನಿಯೋಜನೆ ಪ್ರಕ್ರಿಯೆ ನಿರ್ವಹಿಸುವುದು.
  • ಬೋಧಕ/ಬೋಧಕೇತರ ಸಿಬ್ಬಂದಿಯ ಸೇವಾಜೇಷ್ಟತೆ ಪಟ್ಟಿ ಸಿದ್ದಪಡಿಸಿ , ಮುಂಬಡ್ತಿ ನೀಡುವ ಕಾರ್ಯನಿರ್ವಹಿಸುವುದು.
  • ಸರ್ಕಾರಿ /ಅನುದಾನಿತ ಸಂಸ್ಥೆಗಳ ಸಿಬ್ಬಂದಿಯವರ ನಿವೃತ್ತಿ ವೇತನ ಇತ್ಯರ್ಥಗೊಳಿಸುವುದು.

  ಶೈಕ್ಷಣಿಕ ಶಾಖೆ

  • ಪಾಲಿಟೆಕ್ನಿಕ್ ಗಳ ಹಾಗೂ ಸಿ .ಇ .ಟಿ . ಮೂಲಕ ಮೊದಲನೇ ವರ್ಷದ ಬಿ . ಇ. ಪದವಿ ಪ್ರವೇಶಾತಿಗಾಗಿ ಸೀಟ್ ಮ್ಯಾಟ್ರಿಕ್ಸ್ ತಯಾರಿಸುವುದು.
  • ಪಾಲಿಟೆಕ್ನಿಕ್ ಗಳ ಪ್ರವೇಶಾತಿಗಾಗಿ ಮಾಹಿತಿ ,ಮಾರ್ಗಸೂಚಿಗಳನ್ನು ನೀಡುವುದು ,ಪ್ರವೇಶಾತಿಗೆ ಸಂಬಂಧಿ ಅವಶ್ಯವಿರುವ ನಿಯಮಾವಳಿಗಳನ್ನು ಕಾಲ ಕಾಲಕ್ಕೆ ಪರಿಷ್ಕರಣೆ ಮಾಡುವುದು.
  • ಪಾಲಿಟೆಕ್ನಿಕ್ ಗಳ ಕಾರ್ಯಕ್ರಮಗಳ ದಿನ-ದರ್ಶಿಕೆಯ ವೇಳಾ ಪಟ್ಟಿ ತಯಾರಿಸುವುದು.
  • ಡಿಪ್ಲೋಮಾ ಪದವೀಧರರಿಗೆ ಸಿಇಟಿ ಪರೀಕ್ಷೆಗಾಗಿ ಪ್ರಶ್ನೆ ಪತ್ರಿಕೆ ಮುದ್ರಿಸುವುದು , ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸುವುದು , ಮೆರಿಟ್ ಲಿಸ್ಟ್ ತಯಾರಿಸಿ ಎರಡನೇ ವರ್ಷದ ಬಿ .ಇ . ಪದವಿ ಪ್ರವೇಶಕ್ಕಾಗಿ ಸಂದರ್ಶನ ನಡೆಸುವ ಕಾರ್ಯ ನಿರ್ವಹಿಸುವುದು.
  • ಪಾಲಿಟೆಕ್ನಿಕ್ ಗಳಿಗೆ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಿಗೆ ಹೊರನಾಡು ಕನ್ನಡಿಗ ,ಗಡಿನಾಡು ಕನ್ನಡಿಗ ,ಭಾರತ ಸರ್ಕಾರದ ಮೀಸಲಾತಿ ಮುಂತಾದ ವಿವಿಧ ಮೀಸಲಾತಿಗಳ ಪ್ರವೇಶಾತಿ ಪ್ರಕ್ರಿಯೆಯನ್ನು ನಡೆಸುವುದು.
  • ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಮತ್ತು ಕೌಶಲ್ಯವನ್ನು ಹೊರತರಲು ರಾಜ್ಯಮಟ್ಟದ ತಾಂತ್ರಿಕ ವಸ್ತು ಪ್ರದರ್ಶನ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸುವುದು.

  ಲೆಕ್ಕ-ಪತ್ರ ಶಾಖೆ

  • ಎಲ್ಲಾ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು , ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳು ,ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್ ಗಳಿಗೆ ಯೋಜನೇತರ ಲೆಕ್ಕ ಶೀರ್ಷಿಕೆಗಳ ಅಡಿಯಲ್ಲಿ ಅನುದಾನ ಬಿಡುಗಡೆಗೊಳಿಸುವುದು.
  • ಅಪೆಂಡಿಕ್ಸ್ - ಬಿ ಆಯವ್ಯಯ ಅಂದಾಜು ಪಟ್ಟಿ , ವೆಚ್ಚ ಹಾಗೂ ಆದಾಯಗಳ ಅಂದಾಜು ಪಟ್ಟಿಗಳನ್ನು ತಯಾರಿಸುವುದು . ಎಚ್ ಬಿ ಎ /ಹೆಚ್ ಪಿ ಎ /ಖರೀದಿ ಮುಂಗಡಗಳು ,ವೈದ್ಯಕೀಯ ವೆಚ್ಚ ಮರುಪಾವತಿ,ಸಾಲ ಮುಂತಾದವುಗಳನ್ನು ಮಂಜೂರು ಮಾಡುವುದು . ಎಲ್ಲಾ ಸರ್ಕಾರಿ /ಅನುದಾನಿತ ಇಂಜಿನಿಯರಿಂಗ್ ಹಾಗೂ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಗಳ ಲೆಕ್ಕಪತ್ರ ತಪಾಸಣೆ ನಡೆಸುವುದು.
  • ಅನುದಾನಿತ ಸಂಸ್ಥೆಗಳ ಬಿಲ್ಲುಗಳಿಗೆ , ವಿದ್ಯಾರ್ಥಿವೇತನ , ಎನ್ ಡಿ ಸಿ ಮತ್ತು ಎಸಿ ಬಿಲ್ಲುಗಳನ್ನು ಪರಿಶೀಲಿಸಿ ಮೇಲು ರುಜು ಮಾಡುವುದು.

  ಅಭಿವೃದ್ಧಿ ಶಾಖೆ

  • ಹೊಸ ಇಂಜಿನಿಯರಿಂಗ್ ಕಾಲೇಜುಗಳು /ಪಾಲಿಟೆಕ್ನಿಕ್ ಗಳು/ ಕಿರಿಯ ತಾಂತ್ರಿಕ ಶಾಲೆಗಳನ್ನು ಪ್ರಾರಂಭಿಸುವುದು.
  • ಯೋಜನಾ ಕಾರ್ಯಕ್ರಮಗಳಡಿಯಲ್ಲಿ ಆಯವ್ಯಯ ಮತ್ತು ಅನುಬಂಧ -ಬಿ ತಯಾರಿಸುವುದು .
  • ಅಲ್ಪ ಸಂಖ್ಯಾತ ಮಾನ್ಯತೆಯನ್ನು ಖಾಸಗಿ ಅನುದಾನಿತ ಮತ್ತು ಖಾಸಗಿ ಪಾಲಿಟೆಕ್ನಿಕ್ ಗಳಿಗೆ ನೀಡುವುದು .
  • ಮಾಡ್ ರೋಬ್ಸ್ ಕಾರ್ಯಕ್ರಮಗಳ ನಿರ್ವಹಣೆ .
  • ಎ ಐ ಸಿ ಟಿ ಇ ಮಾನ್ಯತೆ ವಿಸ್ತರಣೆಗಾಗಿ ಎಲ್ಲಾ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ಗುಣಮಟ್ಟ ವೀಕ್ಷಿಸಲು ತಪಾಸಣೆ ನಡೆಸುವುದು.
  • ಇನ್ನಿತರ ಅಭಿವೃದ್ಧಿಗೆ ಸಂಭಂಧಿಸಿದಂತೆ ಕಾರ್ಯ ನಿರ್ವಹಿಸುವುದು.

  ಅಪ್ರೆಂಟೀಸ್ ತರಬೇತಿ ಯೋಜನಾ ಶಾಖೆ

  • ಕೇಂದ್ರೀಕೃತ ಅಪ್ರೆಂಟೀಸ್ ಕಾರ್ಯಕ್ರಮಗಳನ್ನು ನಡೆಸುವುದು .
  • ಆಯ್ಕೆ ಪ್ರಕ್ರಿಯೆ ಮತ್ತು ಸ್ಟೈಫಂಡ್ ನೀಡುವುದು.
  • ಅಪ್ರೆಂಟೀಸ್ ಕಾರ್ಯಕ್ರಮಗಳನ್ನು ನಡೆಸುವ ಸಂಬಂಧ ಉದ್ದಿಮೆಗಳ ಜೊತೆಗೆ ಸಂಪರ್ಕ ಬೆಳೆಸುವುದು.
  • ಸಮುದಾಯ ಪಾಲಿಟೆಕ್ನಿಕ್ ಗಳ ಯೋಜನೆಗಳು.
  • ಉದ್ಯೋಗ ಮಾಹಿತಿ ಕಾರ್ಯಕ್ರಮಗಳು.
  • ಅಭಿವೃದ್ಧಿ ಕಾರ್ಯಕರ್ಮಗಳನ್ನು ಪರಿವೀಕ್ಷಣೆ ಮಾಡುವುದು.
  • ಔದ್ಯೋಗಿಕ ತಿಳುವಳಿಕೆ ಕಾರ್ಯಕ್ರಮಗಳು.
  • ಉದ್ದಿಮೆಗಳ ಮತ್ತು ತಾಂತ್ರಿಕ ಸಂಸ್ಥೆಗಳ ಸಂಬಂಧ ವೃದ್ಧಿ ಕೋಶ.
  • ಉದ್ಯೋಗ ಮಾಹಿತಿ ಕೋಶ.

  ದಾಸ್ತಾನು ಮತ್ತು ಖರೀದಿ ಶಾಖೆ

  • ಪ್ರಯೋಗಾಲಯ ಉಪಕರಣಗಳು ,ಕಂಪ್ಯೂಟರ್ ಯಂತ್ರೋಪಕರಣಗಳು ಹಾಗೂ ಇನ್ನಿತರೆ ಸಲಕರಣೆಗಳು ,ಪೀಠೋಪಕರಣಗಳು , ಪುಸ್ತಕಗಳು ಹಾಗೂ ಇನ್ನಿತರೆ ಶೈಕ್ಷಣಿಕ ಸಂಬಂಧಿಸಿದ ವಸ್ತುಗಳನ್ನು ಸರ್ಕಾರಿ ಪಾಲಿಟೆಕ್ನಿಕ್ ಗಳಿಗೆ ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ನಿಯಮಾನುಸಾರ ಖರೀದಿ ಹಾಗೂ ಅನುಮೋದನೆ ಮಾಡುವುದು.
  • ದರ ಒಪ್ಪಂದ ಅನುಮೋದನೆ ಮಾಡುವುದು.
  • ಪ್ರಯೋಗಾಲಯ ಉಪಕರಣ , ಕಂಪ್ಯೂಟರ್ ಯಂತ್ರೋಪಕರಣ ಮತ್ತು ಇತರೆ ಪರಿಕರಗಳ ವಾರ್ಷಿಕ ನಿರ್ವಹಣೆ ಮತ್ತು ರಿಪೇರಿ ಕೆಲಸ ಕಾರ್ಯಗಳನ್ನು ನಿಯಮಾನುಸಾರ ನಿರ್ವಹಿಸುವುದು.

  ಕಟ್ಟಡ ಶಾಖೆ

  • ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಗಳ ಕಟ್ಟಡ , ಕಾಂಪೌಂಡ್ ನಿರ್ಮಾಣ ಕಾಮಗಾರಿ , ಕಟ್ಟಡ - ವಿಸ್ತಾರಗೊಳಿಸುವುದು ಮತ್ತು ಕಟ್ಟಡ -ದುರಸ್ಥಿ ಕಾಮಗಾರಿಗಳನ್ನು ನಿರ್ವಹಿಸುವುದು.
  • ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಗಳ ಹಾಗೂ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳ ಯೋಜನೆ ಹಾಗೂ ಯೋಜನೇತರ ಅಡಿಯಲ್ಲಿನ ಅಂದಾಜು ಪಟ್ಟಿಗಳನ್ನು ಪರಿಶೀಲಿಸಿ ಮೇಲು ರುಜು ಮಾಡುವುದು.
  • ನೀರು ಮತ್ತು ವಿದ್ಯುತ್ ನಿರ್ವಹಣೆ ಹಾಗೂ ಅವುಗಳ ಬಿಲ್ಲುಗಳನ್ನು ಪಾವತಿಸುವುದು.
  • ನಿರ್ದೇಶಕರು, ಜಂಟಿ ನಿರ್ದೇಶಕರುಗಳು ಹಾಗೂ ಆಡಳಿತಾಧಿಕಾರಿಗಳಿಗೆ ದೂರವಾಣಿ ಸಂಪರ್ಕ ಕಲ್ಪಿಸಿ ನಿರ್ವಹಿಸುವುದು.

  ಪಠ್ಯಕ್ರಮ ಅಭಿವೃದ್ಧಿ ವಿಭಾಗ

  • ಪಠ್ಯಕ್ರಮದ ವಿನ್ಯಾಸ ಮತ್ತು ವಿಮರ್ಶೆ.
  • ಉದ್ಯಮದ ಅಗತ್ಯತೆಗಳ ಪ್ರಕಾರ ಪಠ್ಯಕ್ರಮ .
  • ಬೋಧನೆ ಮತ್ತು ಕಲಿಕೆಯ ಕೌಶಲ್ಯಗಳನ್ನು ಸುಧಾರಿಸುವುದು .
  • ಬೋಧಕ ವೃಂದದವರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸುವುದು .
  • ಕಾಲ -ಕಾಲಕ್ಕೆ ಔದ್ಯೋಗಿಕ ಬೇಡಿಕೆಗಳಂತೆ ಪಠ್ಯಕ್ರಮಗಳನ್ನು ಬದಲಾಯಿಸಿದ್ದಲ್ಲಿ ಆ ಪಠ್ಯಕ್ರಮಗಳ ಬಗ್ಗೆ ಅಧ್ಯಾಪಕರುಗಳಿಗೆ ನಿರಂತರ ಶೈಕ್ಷಣಿಕ ತರಬೇತಿ ನೀಡುವುದು .
  • ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಇಲಾಖೆಗೆ ಆರ್ಥಿಕ ಸಂಪನ್ಮೂಲಗಳನ್ನು ಬಲಪಡಿಸಿಕೊಳ್ಳುವುದು.
  • On -Line Interactive classes ಕಾರ್ಯಕ್ರಮ .

  ಪರೀಕ್ಷಾ ಶಾಖೆ (ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿ )

  • ರಾಜ್ಯದ ಎಲ್ಲಾ ಪಾಲಿಟೆಕ್ನಿಕ್ ಗಳ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸುವುದು.
  • ಡಿಪ್ಲೋಮಾ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಯನ್ನು ವಿತರಿಸುವುದು.
  • ಗಣಕೀಕೃತ ಕೊಡಿಂಗ್ ಮತ್ತು ಡಿಕೊಡಿಂಗ್ ಪದ್ಧತಿ ಮೂಲಕ ಮೌಲ್ಯಮಾಪನದಲ್ಲಿ ಗೌಪ್ಯತೆಯನ್ನು ಕಾಪಾಡುವುದು.
  • ಪರೀಕ್ಷಾ ಸಮಯದಲ್ಲಿ ಆನ್ -ಲೈನ್ ನಲ್ಲಿ ಪರೀಕ್ಷಾ ಮೇಲ್ವಿಚಾರಣೆ ಮಾಡಿ ಪರೀಕ್ಷಾ ಕೆಲಸಗಳು ಸುಲಲಿತವಾಗಿ , ವ್ಯವಸ್ಥಿತವಾಗಿ ನಡೆಯುವಂತೆ ನಿಗವಹಿಸುವುದು .
  • ಅಭ್ಯರ್ಥಿಗಳ ಪಟ್ಟಿ ಮತ್ತು ಅಂಕ ಪಟ್ಟಿಗಳನ್ನು ರಾಜ್ಯದ ಎಲ್ಲಾ ಸರ್ಕಾರಿ /ಖಾಸಗಿ / ಅನುದಾನಿತ / ಖಾಸಗಿ ಅನುದಾನರಹಿತ ಪಾಲಿಟೆಕ್ನಿಕ್ ಗಳಿಗೆ ತಯಾರಿಸಿ ಆನ್ ಲೈನ್ ಮೂಲಕ ಪ್ರಕಟಿಸುವುದು .
  • ಪಾಲಿಟೆಕ್ನಿಕ್ ಗಳಿಗೆ ಸಂಯೋಜನೆ ನೀಡುವುದು .
  • ಪರೀಕ್ಷಾ ಸಂಬಂಧಿ ಕೆಲಸಗಳಿಗೆ ಸಿಬ್ಬಂದಿ /ಅಧಿಕಾರಿಗಳನ್ನು ನಿಯೋಜಿಸುವುದು .
  • ಮೌಲ್ಯಮಾಪನದಲ್ಲಿ ಆಡಳಿತ ವಿಕೇಂದ್ರೀಕರಣ .
  • ಅರ್ಹತಾ ಪ್ರಮಾಣ ಪತ್ರ ಮತ್ತು ವಲಸೆ ಪ್ರಮಾಣ ಪತ್ರ ಮತ್ತು ಇತರೇ ಪ್ರಮಾಣ ಪತ್ರ ಮತ್ತು ಇತರೆ ಪ್ರಮಾಣ ಪತ್ರಗಳನ್ನು "ಸಕಾಲ ಕಾರ್ಯಕ್ರಮ " ದಡಿಯಲ್ಲಿ ನೀಡುವುದು .
  • ರಾಜ್ಯದ ಎಲ್ಲಾ ಸರ್ಕಾರಿ /ಖಾಸಗಿ / ಅನುದಾನಿತ / ಖಾಸಗಿ ಅನುದಾನರಹಿತ ಪಾಲಿಟೆಕ್ನಿಕ್ ಗಳಿಗ ಪರೀಕ್ಷೆಗಾಗಿ ಪ್ರಶ್ನೆ ಪತ್ರಿಕೆಗಳನ್ನು ಮತ್ತು ಉತ್ತರ ಪತ್ರಿಕೆಗಳನ್ನು ಮುದ್ರಿಸಿ ಸರಬರಾಜು ಮಾಡುವುದು.

  ತನಿಖಾ ಶಾಖೆ

  • ಶೈಕ್ಷಣಿಕ ಮತ್ತು ಆಡಳಿತಕ್ಕೆ ಸಂಬಂದ ಪಟ್ಟ ರಾಜ್ಯದ ಎಲ್ಲಾ ಸರ್ಕಾರಿ ,ಅನುದಾನಿತ ಮತ್ತು ಖಾಸಗಿ ಪಾಲಿಟೆಕ್ನಿಕ್ ಗಳ ಪರಿವೀಕ್ಷಣೆ .
  • ಆಡಳಿತ ಪದ್ಧತಿ , ಮೂಲಭೂತ ಸೌಲಭ್ಯ ,ಪ್ರಯೋಗಾಲಯ ಸೌಕರ್ಯ ,ಸಿಬ್ಬಂದಿ ಸೂಕ್ತತೆಗಳ ಬಗ್ಗೆ ಪರಿವೀಕ್ಷಣೆ .
  • ಶೈಕ್ಷಣಿಕ ಚಟುವಟಿಕೆಗಳ ದಾಖಲಾತಿ ನಿರ್ವಹಣೆ ,ಬೋಧನಾ ಪದ್ಧತಿಯ ಮಟ್ಟವನ್ನು ಎ ಐ ಸಿ ಟಿ ಇ ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯಗಳ ನೀತಿಗಳಂತೆ ಸುಧಾರಣೆಗೊಳಿಸುವ ಬಗ್ಗೆ ಪರಿವೀಕ್ಷಣೆ .

  ನಿರಂತರ ತಾಂತ್ರಿಕ ಕೋಶ ,ಕರ್ನಾಟಕ (CCTEK)

  • ಐ . ಟಿ ಯೇತರ ವಿದ್ಯಾರ್ಥಿಗಳಿಗೆ ಐ.ಟಿ ಮಾಹಿತಿ ಒದಗಿಸುವ ತರಬೇತಿ ನಡೆಸುವುದು.
  • ಕಾಲ-ಕಾಲಕ್ಕೆ ಔದ್ಯೋಗಿಕ ಬೇಡಿಕೆಗಳಂತೆ ಪಠ್ಯಕ್ರಮಗಳನ್ನು ಬದಲಾಯಿಸಿದ್ದಲ್ಲಿ ಆ ಪಠ್ಯಕ್ರಮಗಳ ಬಗ್ಗೆ ಅಧ್ಯಾಪಕರುಗಳಿಗೆ ನಿರಂತರ ಶೈಕ್ಷಣಿಕ ತರಬೇತಿ ನೀಡುವುದು .
  • ಕೈಗಾರಿಕೆಗಳಲ್ಲಿನ ಅಕುಶಲ ಕಾರ್ಮಿಕರಿಗೆ ತಾಂತ್ರಿಕ ಕೌಶಲ್ಯ ತರಬೇತಿ ನೀಡುವುದು.
  • ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಇಲಾಖೆಗೆ ಆರ್ಥಿಕ ಸಂಪನ್ಮೂಲಗಳನ್ನು ಬಲಪಡಿಸಿಕೊಳ್ಳುವುದು.
  • ಬೋಧಕ ವೃಂದದವರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸುವುದು.

  ತಾಂತ್ರಿಕ ಶಿಕ್ಷಣ ಸುಧಾರಣಾ ಯೋಜನೆ(TEQIP)

  • ವಿಷಯ ಪರಿಣಿತಿಗಾಗಿ ಶಿಕ್ಷಕರಿಗೆ ಮತ್ತು ಶಿಕ್ಷಕೇತರಿಗೆ ಸಲಹೆ ಮತ್ತು ತರಬೇತಿ ಪ್ರಕ್ರಿಯೆ.
  • ಅತ್ಯಾಧುನಿಕ ಉಪಕರಣಗಳ ಲಭ್ಯತೆ ಮತ್ತು ಪ್ರಯೋಗಾಲಯಗಳ ಆಧುನೀಕರಣ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ ,ಕಟ್ಟಡ ,ಪುಸ್ತಕ ,ಶೈಕ್ಷಣಿಕ ಸಾಮಗ್ರಿಗಳು ಮತ್ತು ಅಂತರ್ಜಾಲ ವ್ಯವಸ್ಥೆ ಸೌಕರ್ಯ ಇತ್ಯಾದಿ .
  • ಆರ್ಥಿಕತೆ ಮತ್ತು ಸಮುದಾಯ ಸೇವೆ , ತಾಂತ್ರಿಕ ಶಿಕ್ಷಣದಲ್ಲಿ ಗುಣಾತ್ಮಕ ಮತ್ತು ಪರಿಣಾಮಕಾರಿ ಅಭಿವೃದ್ಧಿ .
  • ಯೋಜನಾ ನಿರ್ವಹಣೆ ,ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ .

  ಸಂಪರ್ಕಿಸಿ

  ಕ್ರ.ಸಂ ವಿಭಾಗದ ಹೆಸರು

  ಸಂಪರ್ಕಿಸಬೇಕಾದ ವಿವರಗಳು

  e-mail id ಫೋನ್ ನಂ
  1

  ಅಭಿವೃದ್ಧಿ ಶಾಖೆ

  ತಾಂತ್ರಿಕ ಶಿಕ್ಷಣ ಇಲಾಖೆ

  ಅರಮನೆ ರಸ್ತೆ ಬೆಂಗಳೂರು-560001

  ಸಾಮಾನ್ಯ ಆಡಳಿತ ,ಎ.ಐ.ಸಿ.ಟಿ .ಇ ನ ಎಲ್ಲಾ ವಿಷಯಗಳು ,ಹೊಸ ಸಂಸ್ಥೆ ಆರಂಭಿಸಲು ,ಸಂಸ್ಥೆಗಳ ಪರಿಶೀಲನೆ

  jdats.dte@karnataka.gov.in 080-22204928,
  2

  ಆಡಳಿತಾಧಿಕಾರಿ

  ತಾಂತ್ರಿಕ ಶಿಕ್ಷಣ ಇಲಾಖೆ

  ಅರಮನೆ ರಸ್ತೆ ಬೆಂಗಳೂರು-560001

  ಸಾಮಾನ್ಯ ಆಡಳಿತ,ನೇಮಕಾತಿ,

  ವರ್ಗಾವಣೆ

   

  080-22250656

  ಕಾರ್ಯದರ್ಶಿ

  ತಾಂತ್ರಿಕ ಪರೀಕ್ಷಾ ಮಂಡಳಿ

  ಅರಮನೆ ರಸ್ತೆ ,ಬೆಂಗಳೂರು -560001

  ಡಿಪ್ಲೋಮಾ ,ಪೋಸ್ಟ್ ಡಿಪ್ಲೋಮಾ ,ಪರೀಕ್ಷೆ ಮತ್ತು ಫಲಿತಾಂಶ.

  jdexam.dte@karnataka.gov.in 080-22266985,
  4

  ಸಹಾಯಕ ನಿರ್ದೇಶಕರು

  ತಾಂತ್ರಿಕ ಪರೀಕ್ಷಾ ಮಂಡಳಿ

  ಅರಮನೆ ರಸ್ತೆ ,ಬೆಂಗಳೂರು -560001

   

  ಪ್ರವೇಶ ಅನುಮೋದನೆ ,ವಿದ್ಯಾರ್ಥಿ ಅನುಮೋಧನೆ ,ಕಾಲೇಜು /ಕೋರ್ಸ್ ಬದಲಾವಣೆ

  dteacmsection@yahoo.com

  dteacm@hotmail.com

  080-22356949
  5

  ಪಠ್ಯಕ್ರಮ ಅಭಿವೃದ್ಧಿ ವಿಭಾಗ ,ಜಂಟಿ ನಿರ್ದೇಶಕರು ,

  ತಾಂತ್ರಿಕ ಪರೀಕ್ಷಾ ಮಂಡಳಿ

  ಅರಮನೆ ರಸ್ತೆ ,ಬೆಂಗಳೂರು -560001

  ಪಠ್ಯಕ್ರಮ ,ತರಭೇತಿಗಳು ಮತ್ತು ಉನ್ನತ ಶಿಕ್ಷಣ

   

  080-22256700
  ಕ್ರ.ಸಂ ಪದನಾಮ Phone Numbers and e-mail id
  e-mail id Office phone number Fax
  1. ತಾಂತ್ರಿಕ ಶಿಕ್ಷಣ ನಿರ್ದೇಶಕರು dtekar@hotmail.com 080-22200291 080-22261212 
  2. ಜಂಟಿ ನಿರ್ದೇಶಕರು-Administration     -
  3. ಜಂಟಿ ನಿರ್ದೇಶಕರು -Exams jdexam.dte@karnataka.gov.in 080-22266985  
  4. ಜಂಟಿ ನಿರ್ದೇಶಕರು-CDC      
  5. ಜಂಟಿ ನಿರ್ದೇಶಕರು-INS      
  4. ಜಂಟಿ ನಿರ್ದೇಶಕರು-ATS/DVP jdats.dte@karnataka.gov.in 080-22204928  
  5

  ಕಾರ್ಯದರ್ಶಿ,ತಾಂತ್ರಿಕ ಪರೀಕ್ಷಾ ಮಂಡಳಿ

  jdexam.dte@karnataka.gov.in 080-22266985  080-22260924
  6. ಉಪ ನಿರ್ದೇಶಕರು-ATS
  080-22204928
   
  7. ಉಪ ನಿರ್ದೇಶಕರು-LRDC
  adlrdc1.dte@karnataka.gov.in
   
  8. ಉಪ ನಿರ್ದೇಶಕರು-CDC
  ddcdc.dte@karnataka.gov.in
     
  9. ಉಪ ನಿರ್ದೇಶಕರು-IIIC
  ddiiic.dte@karnataka.gov.in
     
  11. ಆಡಳಿತಾಧಿಕಾರಿ   080-22250656  
   
   

   

  ಸಂಸ್ಥೆಯ ರಚನೆ