ತಾಂತ್ರಿಕ ಶಿಕ್ಷಣ ಇಲಾಖೆಗೆ ಸ್ವಾಗತ English

ಪ್ರವೇಶ ವಿಭಾಗ

ಪೂರ್ಣಾವಧಿ ಡಿಪ್ಲೋಮ ಪ್ರೋಗ್ರಾಮ್ ಗಳು

ಕ್ರ.ಸಂ.
ಪ್ರೋಗ್ರಾಮ್ ಕೋಡ್
ಪ್ರೋಗ್ರಾಮ್ ಹೆಸರು
ತಾಂತ್ರಿಕ/ತಾಂತ್ರಿಕೇತರ
1
AE
Aeronautical Engineering
ತಾಂತ್ರಿಕ
2
AG
Agricultural Engineering
ತಾಂತ್ರಿಕ
3
FT
Apparel Design & Fashion Technology 
ತಾಂತ್ರಿಕೇತರ
4
AR
Architecture
ತಾಂತ್ರಿಕ
5
AT
Automobile Engineering
ತಾಂತ್ರಿಕ
6
CR
Ceramics Engineering 
ತಾಂತ್ರಿಕ
7
CH
Chemical Engineering
ತಾಂತ್ರಿಕ
8
CN
Cinematography
ತಾಂತ್ರಿಕ
9
CE
Civil Engineering (General) 
ತಾಂತ್ರಿಕ
10
CD
Civil Engineering.(D'Ship)
ತಾಂತ್ರಿಕ
11
EN
Civil(Environmental) Engineering 
ತಾಂತ್ರಿಕ
12
PH
Civl Engineering (Public Health Engg) 
ತಾಂತ್ರಿಕ
13
CP
Commercial Practice
ತಾಂತ್ರಿಕೇತರ
14
CS
Computer Science & Engineering
ತಾಂತ್ರಿಕ
15
EE
Electrical & Electronics Engineering
ತಾಂತ್ರಿಕ
16
EC
Electronics & Communication Engineering 
ತಾಂತ್ರಿಕ
17
EI
Electronics Instrumentation & Control Engineering
ತಾಂತ್ರಿಕ
18
IS
Information Science & Engineering
ತಾಂತ್ರಿಕ
19
ID
Interior Decoration 
ತಾಂತ್ರಿಕ
20
LT
Leather & Fashion Technology 
ತಾಂತ್ರಿಕ
21
LB
Library Science and Information Management
ತಾಂತ್ರಿಕೇತರ
22
ME
Mechanical Engineering (General) 
ತಾಂತ್ರಿಕ
23
HP
Mechanical Engineering (HPT) 
ತಾಂತ್ರಿಕ
24
WS
Mechanical Engineering (WSM) 
ತಾಂತ್ರಿಕ
25
MY
Mechanical Engineering (MTT)
ತಾಂತ್ರಿಕ
26
MI
Mechanical Engineering (Instrumentation)
ತಾಂತ್ರಿಕ
27
MC
Mechatronics Engineering
ತಾಂತ್ರಿಕ
28
MT
Metallurgy Engineering
ತಾಂತ್ರಿಕ
29
MN
Mining Engineering
ತಾಂತ್ರಿಕ
30
MM
Modern Office Management 
ತಾಂತ್ರಿಕೇತರ
31
PO
Polymer Technology 
ತಾಂತ್ರಿಕ
32
PT
Printing Technology 
ತಾಂತ್ರಿಕ
33
SR
Sound Recording Engineering
ತಾಂತ್ರಿಕ
34
TX
Textile Engineering
ತಾಂತ್ರಿಕ
35
WH
Water Technology and Health Science 
ತಾಂತ್ರಿಕ
3೬
TD
Tool and Die Making  
ತಾಂತ್ರಿಕ

 

ಪರಿಚಯ

ತಾಂತ್ರಿಕ ಶಿಕ್ಷಣ ನಿರ್ದೇಶನಾಲಯವು ಕರ್ನಾಟಕದಲ್ಲಿ ಡಿಪ್ಲೋಮ ಮತ್ತು ಪದವಿ ಕೋರ್ಸುಗಳ ದಾಖಲಾತಿಯ ಮೇಲ್ವಿಚಾರಣೆ ಮಾಡುವ ಮತ್ತು ನಿಯಂತ್ರಿಸುವ ಸಂಸ್ಥೆಯಾಗಿದೆ. ಕರ್ನಾಟಕದ ಈ ಬೃಹತ್ ಕಾರ್ಯವನ್ನು ಕೈಗೊಳ್ಳಲು KEA (Karnataka Examination Authority) ಎಂಬ ಒಂದು ಪ್ರತ್ಯೇಕ ಸೆಲ್ ಅನ್ನು ಸ್ಥಾಪಿಸಿದೆ. ಎಲ್ಲಾ ಡಿಪ್ಲೋಮ ಮತ್ತು ಪದವಿ ಕೋರ್ಸುಗಳ ದಾಖಲಾತಿಯ ಇತ್ತೀಚಿನ ಮಾಹಿತಿಯು Karnataka Examination Authority ಇಲ್ಲಿ ಲಭ್ಯವಿದೆ.

ಪ್ರಥಮ ಸೆಮಿಸ್ಟರ್ ಡಿಪ್ಲೋಮ ಪ್ರವೇಶ

ಪ್ರಥಮ ವರ್ಷದ ಸರ್ಕಾರಿ /ಅನುದಾನಿತ /ಖಾಸಗಿ ( surrendered seats ) ಪಾಲಿಟೆಕ್ನಿಕ್ ಗಳಿಗೆ ಪ್ರವೇಶವನ್ನು Karnataka Examination Authority(KEA) ಮತ್ತು NIC ಸಹಯೋಗದೊಂದಿಗೆ ಮಾಡಲಾಗುವುದು. ಪ್ರವೇಶ ಪ್ರಕ್ರಿಯೆಯು ಸಾಮಾನ್ಯವಾಗಿ ರಾಜ್ಯದ ಸುದ್ದಿ ಪತ್ರಿಕೆಗಳಲ್ಲಿ ಅಧಿಸೂಚನೆಯನ್ನು ಹೊರಡಿಸುವ ಮುಖಾಂತರ ಪ್ರಾರಂಭವಾಗುತ್ತದೆ. ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಸಾಮಾನ್ಯವಾಗಿ SSLC ಫಲಿತಾಂಶಗಳನ್ನು ಘೋಷಿಸುವ ದಿನಾಂಕದ ಸುತ್ತ ಮುತ್ತ ಜಾಹಿರಾತನ್ನು ಪ್ರಕಟಿಸಲಾಗುವುದು. ಈ ಪ್ರಕಟನೆಯನ್ನು http://dte.kar.nic.in ಮತ್ತು www.kea.kar.nic.in ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಹಾಗು ಆಯಾ ಪಾಲಿಟೆಕ್ನಿಕ್ ಗಳ ವೆಬ್ ಸೈಟ್ ನಲ್ಲಿ ಸಹ ಪ್ರವೇಶ ಪ್ರಕಟಣೆಯ ವಿವರಗಳು ಇರುತ್ತದೆ.

ಪ್ರವೇಶ ಪ್ರಕ್ರಿಯೆ

ಅಭ್ಯರ್ಥಿಗಳು ಸ್ವತಃ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ www.kea.kar.nic.in ಮತ್ತು http://dte.kar.nic.in ಗಳಲ್ಲಿರುವ ಅರ್ಜಿ ನಮೂನೆ ಹಾಗೂ ಮಾಹಿತಿ ಪುಸ್ತಕವನ್ನು ಡೌನ್ ಲೋಡ್ ಮಾಡಿಕೊಂಡು ಅರ್ಜಿಯನ್ನು ಮಾಹಿತಿ ಪುಸ್ತಕದಲ್ಲಿರುವ ಸೂಚನೆಗಳನ್ವಯ ಸಂಪೂರ್ಣ ಭರ್ತಿ ಮಾಡುವುದು. ಡಿಪ್ಲೋಮಾ ಪ್ರವೇಶದ ಆಯ್ಕೆಯು ಅರ್ಹತೆ ಮೇಲೆ ಆದರಿಸಿರುತ್ತದೆ. ಒಟ್ಟು ಸ್ಥಾನಗಳಲ್ಲಿ ಶೇಕಡ 50ರಷ್ಟು ಸಮಾಜದ ವಿವಿಧ ಗುಂಪುಗಳಿಗೆ ಮೀಸಲಿರಿಸಲಾಗಿದೆ. ಉಳಿದ ಶೇಕಡ 50 ರಷ್ಟು ಸ್ಥಾನಗಳನ್ನು SSLC ಯಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ನೀಡಲಾಗುತ್ತದೆ. ಅಲ್ಲದೆ ತಾಂತ್ರಿಕ ಕೋರ್ಸುಗಳ ಪ್ರವೇಶಕ್ಕೆ ಅಭ್ಯರ್ಥಿ ಗಳಿಸಿದ SSLC ಯ ಒಟ್ಟು ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಡಿಪ್ಲೋಮ ಪ್ರವೇಶದ ಎಲ್ಲಾ ವಿವರಗಳು Admission Brochure ನಲ್ಲಿ ಇರುತ್ತದೆ. ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶ ಪ್ರಕ್ರಿಯೆಯನ್ನು 2017-18 ನೇ ಸಾಲಿನಿಂದ ಜಾರಿಗೆ ಬರುವಂತೆ ವಿದ್ಯಾರ್ಥಿಗಳ ಪ್ರವೇಶಾತಿಯನ್ನು "ಆನ್ ಲೈನ್ ಇಂಟರಾಕ್ಟೀವ್ " ಕೌನ್ಸಿಲಿಂಗ್ ಮೂಲಕ ತಾಂತ್ರಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ.

ಡಿಪ್ಲೋಮಾ ಪ್ರವೇಶಕ್ಕೆ ಇರಬೇಕಾದ ಅರ್ಹತೆ

1)ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು; ಮತ್ತು

2)ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ವಿದ್ಯಾರ್ಹತೆ: ಕರ್ನಾಟಕ SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಒಟ್ಟಾರೆಯಾಗಿ ಕನಿಷ್ಠ ಶೇ.35 ಅಂಕಗಳನ್ನು ಕಡ್ಡಾಯವಾಗಿ ಪಡೆದಿರಬೇಕು.

3) ಕೆಳಕಂಡ ನಾನ್-ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ವಿದ್ಯಾರ್ಹತೆ .

a)ಕಮರ್ಷಿಯಲ್ ಪ್ರಾಕ್ಟೀಸ್ , ಅಪರೆಲ್ ಡಿಸೈನ್ ಅಂಡ್ ಫ್ಯಾಬ್ರಿಕೇಶನ್ ಟೆಕ್ನಾಲಜಿ, ಡಿಪ್ಲೋಮಾ ಇನ್ ಮಾಡ್ರನ್ ಆಫೀಸ್ ಮ್ಯಾನೇಜ್ ಮೆಂಟ್ -- ಕರ್ನಾಟಕದಲ್ಲಿ SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಒಟ್ಟಾರೆಯಾಗಿ ಕನಿಷ್ಠ ಶೇ.35 ಅಂಕಗಳನ್ನು ಕಡ್ಡಾಯವಾಗಿ ಪಡೆದಿರಬೇಕು.

b) ಲೈಬ್ರರಿ ಸೈನ್ಸ್ & ಇನ್ ಫರ್ಮೇಶನ್ ಮ್ಯಾನೇಜ್ ಮೆಂಟ್ -- ಕರ್ನಾಟಕದ ದ್ವಿತೀಯ ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಒಟ್ಟಾರೆಯಾಗಿ ಕನಿಷ್ಠ ಶೇ.35 ಅಂಕಗಳನ್ನು ಕಡ್ಡಾಯವಾಗಿ ಪಡೆದಿರಬೇಕು.

4) ಅಭ್ಯರ್ಥಿಯು ಕರ್ನಾಟಕದಲ್ಲಿ ಒಂದನೇ ತರಗತಿಯಿಂದ ಅರ್ಹತಾ (SSLC/PUC) ಪರೀಕ್ಷೆಯನ್ನೊಳಗೊಂಡು 05 ವರ್ಷಗಳ ವ್ಯಾಸಂಗ ಮಾಡಿರಬೇಕು.

5) CBSE/ICSE ಅಥವಾ ಕರ್ನಾಟಕೇತರ ರಾಜ್ಯದಲ್ಲಿ SSLC/ತತ್ಸಮಾನ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ತಾಂತ್ರಿಕ ಪರೀಕ್ಷಾ ಮಂಡಳಿ, ಅರಮನೆ ರಸ್ತೆ, ಬೆಂಗಳೂರು-560001 ಇಲ್ಲಿಂದ ಅರ್ಹತಾ ಪ್ರಮಾಣ ಪತ್ರವನ್ನು ಪಡೆದು ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು

ಸಂಜೆ ಪಾಲಿಟೆಕ್ನಿಕ್ ಗಳಲ್ಲಿ ಡಿಪ್ಲೋಮಾ ಪ್ರವೇಶಕ್ಕೆ ಇರಬೇಕಾದ ಅರ್ಹತೆ

ಮೇಲಿನ ಕ್ರ.ಸಂ. 1), 2), 4) ಮತ್ತು 5) ರಲ್ಲಿ ಡಿಪ್ಲೋಮಾ ಪ್ರವೇಶಕ್ಕೆ ನಿಗದಿಪಡಿಸಿರುವ ಅರ್ಹತೆಗಳೊಂದಿಗೆ, ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಬೆಂಗಳೂರು ಸುತ್ತಮುತ್ತಲು ಇರುವ ( ಅಂದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ) ಯಾವುದೇ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಾರ್ಖಾನೆ/ಕೈಗಾರಿಕೆ/ ಸಂಸ್ಥೆಯಲ್ಲಿ SSLC ತೇರ್ಗಡೆಯ ನಂತರ ಸಂಬಂಧಿಸಿದ ವಿಭಾಗದಲ್ಲಿ ಕನಿಷ್ಠ 03 ವರ್ಷಗಳ ತಾಂತ್ರಿಕ ಅನುಭವ ಪಡೆದು ಖಾಯಂ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರಬೇಕು, ಹಾಗೂ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಾರ್ಖಾನೆ/ಕೈಗಾರಿಕೆ/ ಸಂಸ್ಥೆಯು ಕೈಗಾರಿಕಾ ನೊಂದಣೆ ಕಛೇರಿ/ಎಸ್ಎಸ್ ಐನಿಂದ ನೋಂದಾಯಿಸಿರುವ ಬಗ್ಗೆ ಪ್ರಮಾಣ ಪತ್ರ ಲಗತ್ತಿಸಬೇಕು. ಈ ಬಗ್ಗೆ ಅರ್ಜಿಯ ಜೊತೆ ನೀಡಲಾಗಿರುವ ಸೂಚನೆಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿರುತ್ತದೆ.

ಲ್ಯಾಟರಲ್ ಎಂಟ್ರಿ ಕೋಟಾ (20% of intake )

I.T.I ಪಾಸಾದ ವಿದ್ಯಾರ್ಥಿಗಳು ಲ್ಯಾಟರಲ್ ಎಂಟ್ರಿ ಮುಖಾಂತರ 3ನೇ ಸೆಮಿಸ್ಟರ್ /2ನೇ ವರ್ಷ ಡಿಪ್ಲೋಮಾ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಅಂತಹ ಅಭ್ಯರ್ಥಿಗಳು 2017-18ನೇ ಸಾಲಿಗೆ ಆನ್-ಲೈನ್ ಮುಖಾಂತರವೇ ನೋಡಲ್ ಕೇಂದ್ರಗಳ ಮೂಲಕ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಪಾಲಿಟೆಕ್ನಿಕ್ ಗಳ ಪ್ರಾಂಶುಪಾಲರುಗಳನ್ನು ಸಂಪರ್ಕಿಸುವುದು. ಈ ಕೋಟಾದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಅಂಗೀಕೃತವಾದ ಜೆ.ಟಿ.ಎಸ್ (ಕಿರಿಯ ತಾಂತ್ರಿಕ ಶಾಲೆಗಳು) ನಲ್ಲಿ SSLC ಉತ್ತೀರ್ಣರಾಗಿ ಒಟ್ಟಾರೆಯಾಗಿ ಶೇ.35 ಅಂಕಗಳನ್ನು ಪಡೆದಿರಬೇಕು. ಸದರಿ ಅಭ್ಯರ್ಥಿಗಳು ಜೆ.ಟಿ.ಎಸ್ ಕೋಟಾದಲ್ಲಿ ಕಾಯ್ದಿರಿಸಿರುವ ಸ್ಥಾನಗಳಿಗೆ ಮಾತ್ರ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಜೆ. ಟಿ .ಎಸ್ ನ (03 ವರ್ಷಗಳ ಅವಧಿ ) ಮತ್ತು ಐ.ಟಿ.ಐ ನ (02 ವರ್ಷಗಳ ಅವಧಿ) ಸಂಬಂಧಿಸಿದ ಟ್ರೇಡ್ ನಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಆಯಾ ಟ್ರೇಡ್ ನ ಅರ್ಹತೆಗನುಗುಣವಾಗಿ ಡಿಪ್ಲೋಮಾ ಕೋರ್ಸಿಗೆ ಪರಿಗಣಿಸಲಾಗುವುದು.

ಶುಲ್ಕ

ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದ ಶುಲ್ಕ

ಸರ್ಕಾರದ ಆದೇಶ ಸಂಖ್ಯೆ. ಇಡಿ 119 ಟಿಪಿಇ 2005, ದಿನಾಂಕ: 18-10-2005 ಮತ್ತು ಸರ್ಕಾರದ ಆದೇಶ ಸಂಖ್ಯೆ . ಇಡಿ 10 ಟಿಪಿಇ 2012, ದಿನಾಂಕ: 29-05-2012 ಹಾಗೂ ಸರ್ಕಾರದ ಆದೇಶ ಸಂಖ್ಯೆ. ಇಡಿ 64 ಟಿಪಿಇ 2016, ದಿ:21-06-2016ರನ್ವಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಅನುದಾನರಹಿತ ಪಾಲಿಟೆಕ್ನಿಕ್ ಗಳಿಗೆ ಅನ್ವಯವಾಗುವಂತೆ ಕೆಳಕಂಡ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಕ್ರ .ಸಂ.

ಪಾಲಿಟೆಕ್ನಿಕ್

ಬೋಧನಾ ಶುಲ್ಕ

ಅಭಿವೃದ್ಧಿ ಶುಲ್ಕ

ಇತರೆ ಶುಲ್ಕ

ಒಟ್ಟು

1

ಸರ್ಕಾರಿ ಪಾಲಿಟೆಕ್ನಿಕ್

2800/-

500/-

830/-

4,130/-

2

ಅನುದಾನಿತ ಪಾಲಿಟೆಕ್ನಿಕ್

5,350/-

500/-

830/-

6,680/-

3

ಖಾಸಗಿ ಪಾಲಿಟೆಕ್ನಿಕ್

11,500/-

500/-

830/-

12,830/-

* ಎನ್.ಎಸ್.ಎಸ್ ಘಟಕ ಇರುವ ಸಂಸ್ಥೆಗಳು ಮೇಲ್ಕಂದ ಇತರೆ ಶುಲ್ಕದ ಜೊತೆಗೆ ರೂ.40/- ನ್ನು ಎಲ್ಲಾ ವಿದ್ಯಾರ್ಥಿಗಳಿಂದ ಪ್ರವೇಶ ಸಮಯದಲ್ಲಿ ಪಾವತಿಸಿಕೊಳ್ಳತಕ್ಕದ್ದು.

** ಎನ್.ಎಸ್.ಎಸ್ ಘಟಕ ಇಲ್ಲದ ಸಂಸ್ಥೆಗಳು ಮೇಲ್ಕಂದ ಇತರೆ ಶುಲ್ಕದ ಜೊತೆಗೆ ರೂ.50/- ನ್ನು ಎಲ್ಲಾ ವಿದ್ಯಾರ್ಥಿಗಳಿಂದ ಪ್ರವೇಶ ಸಮಯದಲ್ಲಿ ಪಾವತಿಸಿಕೊಳ್ಳತಕ್ಕದ್ದು.

ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಸರ್ಕಾರದ ಆದೇಶಗಳ ಪ್ರಕಾರ ಪಾವತಿಸಬೇಕಾಗಿರುವ ಶುಲ್ಕಗಳ ವಿವರ :

ಕ್ರ.ಸಂ

ಅಭ್ಯರ್ಥಿಯು ಕ್ಲೇಮ್ ಮಾಡಿದ ವರ್ಗ

ಪೋಷಕರ ವಾರ್ಷಿಕ ಆದಾಯ ಮಿತಿ

ಸರ್ಕಾರದ ಆದೇಶಗಳ ಪ್ರಕಾರ ಪಾವತಿಸಬೇಕಾಗಿರುವ ಶುಲ್ಕಗಳ ವಿವರ

ಸರ್ಕಾರಿ ಪಾಲಿಟೆಕ್ನಿಕ್

ಅನುದಾನಿತ ( ಅನುದಾನಿತ ಕೋರ್ಸುಗಳಿಗೆ )

ಖಾಸಗಿ /ಅನುದಾನಿತ ಪಾಲಿಟೆಕ್ನಿಕ್ (ಅನುದಾನರಹಿತ)

1 ಸಾಮಾನ್ಯ

------

----

4,130/-

6,680/-

12,830/-

2 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ

2.50 ಲಕ್ಷ

430/-

430/-

430/-

2.50 ದಿಂದ 10.00 ಲಕ್ಷ

800/-

800/-

800/-

3 ಪ್ರವರ್ಗ -1

2.50 ಲಕ್ಷ

960/-

3,510/-

9,660/-

4 2A/3A/3B ಹಾಗೂ ಎಲ್ಲಾ ಜಾತಿಯ & ಧರ್ಮಗಳು

1.00 ಲಕ್ಷ

960/-

3,510/-

9,660/-

5 ಎಸ್.ಎನ್.ಕ್ಯೂ (SNQ)

6.00 ಲಕ್ಷ

1,330/-

1,330/-

1,330/-

* ಎನ್.ಎಸ್.ಎಸ್ ಘಟಕ ಇರುವ ಸಂಸ್ಥೆಗಳು ಹೆಚ್ಚುವರಿಯಾಗಿ ಸ್ವ-ಆರ್ಥಿಕ ಘಟಕ ಸ್ಥಾಪಿಸುವವರಿದ್ದರೆ ಮಾತ್ರ ಮೇಲ್ಕಂಡ ಶುಲ್ಕದ ಜೊತೆಗೆ ರೂ.40/- ನ್ನು ವಿದ್ಯಾರ್ಥಿಗಳಿಂದ ಪ್ರವೇಶ ಸಮಯದಲ್ಲಿ ಪಾವತಿಸಿಕೊಳ್ಳತಕ್ಕದ್ದು.

** ಎನ್.ಎಸ್.ಎಸ್ ಘಟಕ ಇಲ್ಲದ ಸಂಸ್ಥೆಗಳು ಸ್ವ-ಆರ್ಥಿಕ ಘಟಕ ಸ್ಥಾಪಿಸಲು ಮೇಲ್ಕಂಡ ಶುಲ್ಕದ ಜೊತೆಗೆ ರೂ.50/- ನ್ನು ವಿದ್ಯಾರ್ಥಿಗಳಿಂದ ಪ್ರವೇಶ ಸಮಯದಲ್ಲಿ ಪಾವತಿಸಿಕೊಳ್ಳತಕ್ಕದ್ದು.

***ಪ್ರತಿ ಪಾಲಿಟೆಕ್ನಿಕ್ ನಲ್ಲಿ ಕನಿಷ್ಠ ಒಂದಾದರೂ ಎನ್.ಎಸ್.ಎಸ್ ಘಟಕ ಸ್ಥಾಪಿತವಾಗಿರಬೇಕು.